*ಆರಲಿ ಧಗೆ*
ಬಂತು ಬಂತು ಬೇಸಿಗೆ
ಇನ್ನು ಓಡಬೇಕು ನೆರಳಿಗೆ
ಹನಿ ನೀರಿಗೂ ಇಲ್ಲಿ ತತ್ವಾರ
ಇನ್ನು ದೂಡುವುದೆಂತು ಸಂಸಾರ
ಗಿಡ ಮರಗಳೆಲ್ಲ ಎಲೆಯುದುರಿ
ಹೊಸಚಿಗುರು ಮೂಡಿ ನಲಿದಾವೆ
ಉರಿ ಬಿಸಿಲ ಧಗೆ ತಾಳದೆ
ಜೀವಜಾಲ ಬಯಸಿ ಓಡಿದೆ
ಇದ್ದಬದ್ದ ಕೆರೆಕಟ್ಟೆಗಳೆಲ್ಲಾ ಒಣಗಿ
ನೀರಿಲ್ಲದ ಪಳೆಯುಳಿಕೆಗಳಾಗಿವೆ
ಖಗಮೃಗ ಗಳೆಲ್ಲ ಬಾಯಾರಿ ಬಳಲಿ
ಹನಿ ನೀರಿಗಾಗಿ ಅಲೆದಾಡುತಿವೆ
ಮುಂಗಾರು ಮಳೆಯಿಂದ ದೂರವಿದೆ
ಭೂತಾಯ ಒಡಲೀಗ ಕೆಂಡದಂತಿದೆ
ಇನ್ನೆಷ್ಟು ದಿನವೋ ಈ ಬವಣೆ
ಸೂರ್ಯ ನಿನಗೆ ಏಕಿಲ್ಲ ಕರುಣೆ
ಬಾನೆಲ್ಲ ಬರಿದಾಗಿ ನಿಂತಿದೆ
ನೀನ ಗಗನವೇ ಸೋತಂತೆ ಇದೆ
ವರ್ಷಧಾರೆ ಸುರಿವ ತನಕ
ನಮಗೆ ತಪ್ಪದು ಈ ಕಂಟಕ
ಸುರಿದು ಬಿಡಲಿ ಒಮ್ಮೆಗೇ
ಭೂಮಿಯಲ್ಲ ಆಗಲಿ ತಣ್ಣಗೆ
ಹೂವರಳಿ ಬೀರಲಿ ನಗೆ
ಮಳೆಬಂದು ಆರಲಿ ಬಿಸಿಲ ಧಗೆ
0704ಪಿಎಂ21032018
*ಅಮು ಭಾವಜೀವಿ*
ದೇವ್ಲಾನಾಯ್ಕ ಅವರ ಪ್ರತಿಕ್ರಿಯೆ
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ.....ನಾಳೆಗಾಗಿ ಇಂದೇ ಸಿಧ್ಧರಾಗಿ ಜನ ಜಾಗೃತಿ ಮೂಡಿಸೋಣ
ಅದ್ಭುತ ಅತ್ಯುತ್ತಮ ಅರ್ಥಪೂರ್ಣ ನುಡಿಗಳು 👌✌👍
No comments:
Post a Comment