Friday, June 21, 2019

ನಿನ್ನ ಕಿರುನಗೆಯೊಂದಿಗೆ
ಈ ಜಗದ ಜಂಜಡ ಮರೆವೆ
ನಿನ್ನೊಲವಿನ ಸ್ಪರ್ಶದೊಂದಿಗೆ
ಜೀವನಪೂರ್ತಿ ಆನಂದ ಪಡೆವೆ

ಎಲ್ಲ ನೋವುಗಳ ಕಿತ್ತೆಸೆದು
ನಿನ್ನ ನಗುವನ್ನಷ್ಟೇ ನಾ ಕಲಿವೆ
ಎಲ್ಲ ದೂರುಗಳ ರದ್ದುಗೊಳಿಸಿ
ಮೇರು ಪ್ರೀತಿಯಲ್ಲಿ ಸುಖ ಕಾಣುವೆ

ನನ್ನ ನಡೆಯ ಎಲ್ಲ ಸೋಲುಗಳಿಗೆ
ಜಯದ ಮುನ್ನುಡಿ ಬರೆವೆ ನಿನ್ನೊಂದಿಗೆ
ಇಲ್ಲಗಳ ಕೊರಗನು ದೂರವಿರಿಸಿ
ಬದುಕುವೆ ನಾ ನಿತ್ಯ ಸಂಭ್ರಮಿಸಿ

ಪುಣ್ಯದ ಭಾಗವಿದು ನನ್ನ ಬದುಕು
ಕಾಪಿಟ್ಟುಕೊಳ್ಳುವೆ ಬರೆದಂತೆ ಕೆಡುಕು
ನೀನಿರುವ ಪ್ರತಿಕ್ಷಣವೂ ಹೊಸದು
ಅದುವೆ ನನಗೆ ಸ್ಪೂರ್ತಿಯಾಗಿಹುದು

ಸದಾ ನನ್ನ ಕಾಯುತ್ತಿರುವ
ರಕ್ಷಾ ಕವಚವು ನೀನು ಗೆಳತಿ
ಜನುಮಗಳ ಆಚೆಗಿನ ಆಸೆ ಇಲ್ಲ
ಈ ಜನ್ಮದಲ್ಲಿ ನನಗೆ ಸಿಕ್ಕಿರಲು ಪ್ರೀತಿ

0711ಎಎಂ08042019
*ಅಮು ಭಾವಜೀವಿ*
   

No comments:

Post a Comment