Friday, June 21, 2019

*ಶುಭೋದಯ*

ಈ ಮುಂಜಾನೆಯಲಿ
ಮಂಜಿನ ಹನಿಗಳಲಿ
ಹೊಳೆವ ಕಿರಣಗಳಲ್ಲಿ
ಹೇಳಿತು ಶುಭೋದಯ

ಹಕ್ಕಿಗಳ ಇನಿದನಿಯಲ್ಲಿ
ಹರಿವ ನದಿಯ ನಾದದಲ್ಲಿ
ಸುಯ್ ಗುಡುವ ತಂಗಾಳಿಯಲ್ಲಿ
ಹೇಳಿತು ಶುಭೋದಯ

ಬಾನ ವಿಸ್ತಾರದಲ್ಲಿ
ಬೆಳಕಿನ ಕಿರಣ ಚೆಲ್ಲಿ
ಮೋಡಗಳ ಮರೆಯಲ್ಲಿ
ಹೇಳಿತು ಶುಭೋದಯ

ಬಿರಿದ ಮೊಗ್ಗುಗಳಲ್ಲಿ
ಮುದುಡಿದ ಎಲೆಗಳ ಭಿತ್ತಿಗಳಲ್ಲಿ
ಪ್ರಕೃತಿಯ ಆ ಸೊಬಗಿನಲ್ಲಿ
ಹೇಳಿತು ಶುಭೋದಯ

ಸಾಗರದ ಅಲೆಗಳಲ್ಲಿ
ತೀರದ  ಸಹನೆಯಲ್ಲಿ
ಚೆಲ್ಲಿದ ಹೊಂಬಣ್ಣದಲ್ಲಿ
ಹೇಳಿತು ಶುಭೋದಯ

ತೆಂಗು ಬಾಳೆ ತವರಿನಲ್ಲಿ
ಹೊಂಗೆ ಹೂವ ಸಂಘದಲ್ಲಿ
ದುಂಬಿಗಳ ಝೇಂಕಾರ ದಲ್ಲಿ
ಹೇಳಿತು ಶುಭೋದಯ

ನಿತ್ಯ ಬದುಕಿನ ಹೊಸತನದಲ್ಲ
ಮರೆತ ನೋವುಗಳ ನೆನಪಲ್ಲಿ
ದುಡಿದ ದಣಿವ ಕಳೆದು
ಹೇಳಿತು ಶುಭೋದಯ

0713ಎಎಂ18032018

*ಅಮುಭಾವಜೀವಿ*
   

No comments:

Post a Comment