Friday, June 21, 2019

ಬಾನ ಬಯಲಿನಲಿ
ಹೊಳೆಯುತ್ತ ಬಂದ
ದಿನದ ಒಡೆಯ ಸೂರಪ್ಪ
ತನ್ನಯ ಕಾಯಕ ಮಾಡುತ್ತಾ
ಜಗವ ಬೆಳಗುವ ನಿಮಿತ್ತ
ತೋರಿದ ಬಿಸಿಲ ಪ್ರತಾಪ

ಮನೆಯ ಮಂಜಿನ ಜೊತೆಯಲಿ
ಅರಳುವ ಹೂಗಳ ನಗುವಲ್ಲಿ
ಆಹಾ ! ಎಂಥ ಸೊಗಸಿದು ಮುಂಜಾನೆ
ಹಕ್ಕಿಗಳ ಚಿಲಿಪಿಲಿ ಜೊತೆಗೆ
ಹರಿಯುವ ಸಲಿಲದ ಮೋಡಿಗೆ
ಮೂಡಿತು ಮನದಲಿ ಹೊಸ ಭಾವನೆ

ನಿಸರ್ಗವೇ ನಮಿಸಿತು ತಲೆಬಾಗಿ
ಬೆಳಕನು ತಂದ ರವಿಗಾಗಿ
ದಿನವೆಲ್ಲವೂ ಸಂಭ್ರಮಿಸುತ್ತ
ದಿನಕರ ಇವನೆಂಥ ಚೆಲುವ
ತೆರೆದಿಟ್ಟ ಜಗದ ಸೊಗವ
ಎಲ್ಲರೂ ಸವಿಯಿರಿ ಎನ್ನುತ್ತ

06:58 ಎ ಎಂ 11 4 2019

*ಅಮು ಭಾವಜೀವಿ*

No comments:

Post a Comment