ಮೊದಲ ಮಳೆ ಬಂತು
ಬುವಿ ಎದೆಯ ತಣಿಸಿತು
ಭರವಸೆಯ ನಾಲ್ಕು ಹನಿ ಚೆಲ್ಲಿ
ಮತ್ತೆ ಮೂರು ಹೊಂಗನಸ ಬಿತ್ತಿತು
ಬೇಸಿಗೆಯ ಬೇಗೆ ಸಹಿಸಿ
ಬಾಯಾರಿ ಧಗೆಯ ಅನುಭವಿಸಿ
ವಸಂತ ಕಳೆಯುವ ಮೊದಲೇ
ಹೊಸ ನಿರೀಕ್ಷೆಗಳ ತಂದ ಮಳೆರಾಯ
ಕೆಂಡ ಕಟ್ಟಿಕೊಂಡ ಮಡಿಲೀಗ
ತಣ್ಣನೆಯ ಒಲವಲಿ ಮಿಂದಿತು
ಬೇಸರದ ಕಾಡ್ಗಿಚ್ಚು ನಂದಿ
ಸಂಭ್ರಮದ ಚಿಗುರು ಮೂಡಿತು
ಮುಂಗಾರಿನ ಈ ಸಿಂಚನ
ಪ್ರಕೃತಿಯಲ್ಲಿ ತಂತು ಹೊಸತನ
ಬಳಲಿಕೆಯ ದೂಡಿ ಹೊರಗೆ
ಚೇತರಿಕೆಯ ತಂತು ಜೀವ ಜಗಕೆ
ಉರಿವ ರವಿಯ ತಂಪಾಗಿಸಲು
ಸುರಿದ ವರುಣನ ಘಮಲು
ಆತಂಕವು ಇನ್ನಿಲ್ಲ ಭೂಮಿಯಲಿ
ಬೇಸಿಗೆಯು ತಣ್ಣಗಾಯಿತು ಈಗಿಲ್ಲಿ
ಹೊಸ ನಿರೀಕ್ಷೆಗಳ ಹನಿ ಚೆಲ್ಲಿ
ನೆನೆದ ಮಣ್ಣ ಕಂಪಿನಲ್ಲಿ
ನೂರಾರು ಭರವಸೆಗಳ ಮೂಡಿಸಿ
ಮಳೆ ಸುರಿಯಿತು ಮೊದಲ ದಿನ
6 25 ಎ ಎಂ 9 4 2019
*ಅಮು ಭಾವಜೀವಿ*
No comments:
Post a Comment