Thursday, June 13, 2019

*ಜಗದ ವಿನ್ಯಾಸಕಾರ*

ಪ್ರಕೃತಿಯಿದು ಎಷ್ಟೊಂದು ಸುಂದರ
ಇದ ರಚಿಸಿದನವನಾರೋ ಅಭಿಯಂತರ

ವರುಷವ ಮೂರು ಭಾಗವಾಗಿಸಿ
ಬಿಸಿಲು ಮಳೆ ಚಳಿಗಾಲಕೆ ಹೊಂದಿಸಿ
ಹಗಲು ಇರುಳಿಗೆ ಇಬ್ಬರ ನೇಮಿಸಿ
ಮುನ್ನಡೆಸುವನು ಆ ಜಾಣ ತಂತ್ರಜ್ಞ

ಹಸಿರು ಗಿಡಮರಗಳ ಸೃಷ್ಟಿಸಿ
ಬಗೆ ಬಗೆಯ ಹೂಹಣ್ಣುಗಳನಿರಿಸಿ
ಸಕಲ ಜೀವಿಗಳ ಸಲಹುವ
ಹೊಣೆ ಹೊತ್ತ ಚಾಣಾಕ್ಷ 

ಅತಿವೃಷ್ಟಿ ಅನಾವೃಷ್ಟಿಯ ಜನಕ
ಅಣು ಕಣಗಳ ಜೋಡಿಸುವ ಕಾರ್ಮಿಕ
ಎಲ್ಲಾ ಆಗುಹೋಗುಗಳ ನಿಯಂತ್ರಿಸಿ
ಜಗವ ಮುನ್ನಡೆಸುವ ಚಾಲಕ

ಬುವಿಯ ನೀರನೇ ಆವಿಯಾಗಿಸಿ
ಮಳೆಯ ರೂಪದಿ ಮತ್ತೆ ಸುರಿಸಿ
ನದಿ ಹಳ್ಳ ಕೆರೆಕಟ್ಟೆಗಳ ತುಂಬಿಸಿ
ಬಯಲ ಬದುಕಿಗಾಸರೆಯಾದವನು

ಮುಂಜಾನೆಗೆ ಮಂಜಿನ ಹನಿ ಹಾಸಿ
ಮಧ್ಯಾಹ್ನಕೆ ಉರಿ ಬಿಸಿಲಿರಿಸಿ
ಮುಸ್ಸಂಜೆಯ ಗೋಧೂಳಿಗೆ
ಬಣ್ಣ ಬೆರೆಸಿದ ಈ ರಸಿಕ

ಈ ಜಗದ ವಿನ್ಯಾಸಕಾರ
ನಿನಗೆ ಕೋಟಿ ನಮನ
ನಿನ್ನ ಲೆಕ್ಕ ತಪ್ಪದ ರಚನೆಯಂತೆ
ಸಾಗುತಿದೆ  ನಮ್ಮ ಈ ಜೀವನ

0440ಪಿಎಂ07062019

*ಅಮು ಭಾವಜೀವಿ*

No comments:

Post a Comment