ನೀ ತೊರೆದು ಹೋದಾಗ
ಮತ್ತೆ ಮತ್ತೆ ನೆನಪು ಕಾಡಿದಾಗ
ಮನವು ಕೊರಗಿ ಕೂತಿತು
ಪ್ರೀತಿ ಮಾಡಿ ತಪ್ಪಾಯ್ತು
ನೀ ಕೊಟ್ಟ ನೋವು ಅತಿಯಾಗಿ
ಬದುಕು ಸೋಲನುಂಡಿತು
ಕಂಡ ಕನಸುಗಳೆಲ್ಲ ಈಗ
ನನಸಾಗದೆ ಕೊರಗಿ
ವಿರಹದ ಕುರುಹಾಗಿವೆ
ಆಡಿದ ಮಾತುಗಳೆಲ್ಲ
ಅವಹೇಳನ ಮಾಡುತ್ತಾ
ಮತ್ತಷ್ಟು ನೋವು ನೀಡುತಿವೆ
ಈ ಒಂಟಿ ಪಯಣಕಿನ್ನು
ನಿಲ್ದಾಣ ಸಿಗದೆ ಪರಿತಪಿಸಿ
ಗುರಿ ತಪ್ಪಿ ಸಾಗಿದೆ
ಪ್ರೀತಿಯಲ್ಲಿ ಸೋಲು ಸಹಜ
ಇದ ನೀನರಿಯೋ ಮನುಜ
ಬದುಕೀಗ ಬರಿದಾಗಿದೆ
ನಡೆವ ನಾನು ಎಡವಿಯಾಯ್ತು
ಸೋರುವ ರಕ್ತ ಕೂಡ
ನಿನ್ನ ನೆನಪನು ಮತ್ತೆ ಜ್ಞಾಪಿಸಿತು
ಬಿದ್ದ ಎಡೆಯಲ್ಲಿಯೇ
ನಿತ್ರಾಣಗೊಂಡಿರುವೆ
ನಿನ್ನ ಪ್ರೀತಿ ಇಂಥ ಗತಿ ತಂತು
1055ಪಿಎಂ06062019
*ಅಮು ಭಾವಜೀವಿ*
No comments:
Post a Comment