*ಗಜಲ್*
ಹಗಲು ಉರಿದು ಈಗ ತಂಪಾಯಿತು
ಮೊದಲ ಮಳೆ ಬಂದೀಗ ತಂಪಾಯಿತು
ಬರದ ಭೀಕರ ಕದನ ಕಂಡು ಇಳೆ
ಇರುಳಲಿ ಇಳಿದೀಗ ತಂಪಾಯಿತು
ವಸಂತ ಬಂದು ಸಂತನಾಗದೇ
ಚಿಗುರ ಕಂಡು ಈಗ ತಂಪಾಯಿತು
ಬಾಯಾರಿದ ಖಗಗಳ ಗಂಟಲಿಂದ
ಇನಿದನಿಯ ರಾಗ ಹರಿದೀಗ ತಂಪಾಯಿತು
ಮೋಡಗಳ ಮರೆಯಲ್ಲಿ ಬಾನಸುಮ
ಸಂಜೆಯ ಮನೆ ಸೇರಲು ಈಗ ತಂಪಾಯಿತು
ಅವನಿಗಾಗಿ ಕಾದು ಕುಳಿತವಳ
ಮನದಿಂಗಿತ ಅರಿತೀಗ ತಂಪಾಯಿತು
*ಅಮು* ವಿನ ಭಾವದ ಅಭಾವ
ನೀಗಲು ಧರೆ ಈಗ ತಂಪಾಯಿತು
06041ಪಿಎಂ2042019
*ಅಮು ಭಾವಜೀವಿ*
ತಿದ್ದುಪಡಿಯೊಂದಿಗೆ
*ಗಜಲ್*
ಹಗಲು ಉರಿದು ಈಗ ತಂಪಾಯಿತು
ಮೊದಲ ಮಳೆ ಬಂದೀಗ ತಂಪಾಯಿತು
ಬರದ ಭೀಕರ ಕದನ ಕಂಡು ಇಳೆ
ಇರುಳಲಿ ಇಳಿದೀಗ ತಂಪಾಯಿತು
ವಸಂತ ಬಂದು ಸಂತನಾಗದೇ
ಚಿಗುರ ಕಂಡಾಗ ತಂಪಾಯಿತು
ಬಾಯಾರಿದ ಖಗಗಳ ಗಂಟಲಿಂದ
ಇನಿದನಿಯ ರಾಗ ಹರಿದೀಗ ತಂಪಾಯಿತು
ಮೋಡಗಳ ಮರೆಯಲ್ಲಿ ಬಾನಸುಮ
ಸಂಜೆಯ ಮನೆ ಸೇರುವಾಗ ತಂಪಾಯಿತು
ಅವನಿಗಾಗಿ ಕಾದು ಕುಳಿತವಳ
ಮನದಿಂಗಿತ ಅರಿತೀಗ ತಂಪಾಯಿತು
*ಅಮು* ವಿನ ಭಾವದ ಅಭಾವ
ನೀಗಲು ಧರೆ ಈವಾಗ ತಂಪಾಯಿತು
06041ಪಿಎಂ2042019
*ಅಮು ಭಾವಜೀವಿ*
ಶುಭ ಸಂಜೆ...*ಸರಿಯಾಗಿರಬೇಕು ಈಗ*
No comments:
Post a Comment