*ಹೇಗೆ ಬಂದೆ*
ಅದು ಯಾವಾಗ ಹೇಗೆ
ಒಳಗೆ ಬಂದೆಯೋ ಕಾಣೆ
ನೀ ಬಂದ ಮರುಘಳಿಗೆ
ನನ್ನ ತನವೇ ನನ್ನಿಂದ ಕಾಣೆ
ಮೊದಲೆಲ್ಲ ಹೀಗಿರಲಿಲ್ಲ ನಾನು
ನನ್ನಂತೆ ಬದುಕುತ್ತಿದ್ದವನು
ನಿನ್ನ ಅಗಾಧವಾದ ಕೂಡಲೇ
ನನ್ನನ್ನೇ ನಾನು ಮರೆತುಬಿಟ್ಟೆನು
ಏಕೆ ಬಂದೆ ಕಣ್ಣ ಮುಂದೆ
ನಿನ್ನ ನೋಡಿ ನಾ ಶಿಲೆಯಾಗಿ ನಿಂದೆ
ಕುಂತರೂ ನಿಂತರೂ ಧ್ಯಾನ ನಿನ್ನದೇ
ಕೇಳಿಯೂ ಕೇಳದಾದೆ ಜಗದ ನಿಂದೆ
ಯಾರೋ ನೀನು ಗೊತ್ತಿಲ್ಲ ನನಗೆ
ಹೀಗೆ ಬಂದು ಹಾಗೆ ಮಾಯವಾದೆ ನೀ
ಆಗಿನಿಂದ ನನ್ನೊಳಗೆ ನಾನೇ ಇಲ್ಲ
ನಿನಗಾಗಿ ಕಾದು ನಾ ಖಾಲಿಯಾದೆನಲ್ಲ
ಲಯ ತಪ್ಪಿದ ಬದುಕಿನಲ್ಲಿ
ಈಗ ಪ್ರಳಯದ ಭಯ ಕಾಡಿದೆ
ಅಲುಗಾಡುವ ಬಾಳ ಬುನಾದಿಗೆ
ನಿನ್ನ ಒಲವಿನಾಸರೆ ಬೇಕಾಗಿದೆ
ಮತ್ತೆ ನಾನು ನಾನಾಗಲು ಬಿಡು
ನಿನ್ನ ಗುಂಗಿಂದ ನನ್ನ ಹೊರದೂಡು
ಈ ನೋವು ಈ ಹತಾಶೆ ಎಲ್ಲವನ್ನೂ
ನೀಗಿಸು ಬಂದು ಕೈ ಬಿಡದೆ ಇನ್ನು ಮುಂದೆ
0526ಎಎಂ13062019
*ಅಮು ಭಾವಜೀವಿ*
No comments:
Post a Comment