ಹಂಬಲಕೆ ಬೆಂಬಲವಾಗಿ
ನೀನಿರು ಗೆಳೆಯ
ನೂರು ನೋವುಗಳ
ಸಹಿಸಿ ಬಾಳುವೆನು ಜೊತೆಯಾಗಿ
ಜೀವನ ಪಯಣವಿದು
ಬರೀ ನೆರಳ ಹಾದಿಯಲ್ಲ
ಬರದ ಬೇಸಿಗೆಯೂ ಕಾಡುವುದು
ನೀ ನಕ್ಕರೆ ಅದು
ಬೀಸುವ ತಂಗಾಳಿ
ನಿನ್ನ ಲಲ್ಲೆ ಮಾತುಗಳು
ನೀಡುವುವು ಕಚಗುಳಿ
*ಅಮು ಭಾವಜೀವಿ*
ಅವಳಿಲ್ಲದ ಈ ಹೊತ್ತಲ್ಲಿ
ತುಂಬಾ ನೆನಪಾಗುವೆ ನೀನು
ಆ ನೆಪದಲ್ಲಾದರೂ ನಿನ್ನ
ಮತ್ತೆ ಜ್ಞಾಪಿಸಿಕೊಳ್ಳುವೆ ನಾನು
ಅಮು ಭಾವಜೀವಿ
No comments:
Post a Comment