*ಭಾವಯಾನ ೨೫*
ತುಂಬು ಗರ್ಭಿಣಿಯಂತಹ
ಮೇಘಗಳು ಹೊತ್ತು ತಂದ
ತುಂತುರು ಮಳೆ ಹನಿಗಳ
ಸ್ಪರ್ಶದಿ ಹಸಿರಾದ ನಿಸರ್ಗದ
ಆನಂದದಿ ಜೊತೆಯಾದ
ಈ ಭಾವಯಾನ ಇರುಳ
ದಾಟಿ ಬೆಳಗ ಮುಟ್ಟಿ
ಜೀವನ ಪಥದಿ ನವ ನಿರೀಕ್ಷೆಗಳ
ಪರೀಕ್ಷೆಗೊಡ್ಡಿ ಪ್ರತಿ ಹೆಜ್ಜೆಗೂ
ಹೊಸತನದ ಸ್ಪೂರ್ತಿ ಪಡೆದಿದೆ
0626ಎಎಂ13062019
ಅಮು ಭಾವಜೀವಿ
No comments:
Post a Comment