*ಹಸಿವಿನ ಗೀಳು*
ಬದುಕಿನ ಈ ಹೋರಾಟಕೆ
ಬೇಕು ಇಂಥ ಪ್ರಯತ್ನ
ಹಸಿವು ಎಂಬ ಅಗತ್ಯ
ಮಾಡಿಸುವುದು ಇಂತಹ ಯತ್ನ
ಅನಿವಾರ್ಯದ ಬದುಕಿನಲ್ಲಿ
ಬವಣೆಗಳ ಪರೀಕ್ಷೆಯಲ್ಲಿ
ನಿಲ್ಲಬೇಕು ಒಂಟಿ ಕಾಲಲ್ಲಿ
ಗೆಲ್ಲಬೇಕು ಜೀವನದಲ್ಲಿ
ಮಾನವನ ದುರಾಸೆಗೆ
ಇಲ್ಲೆಲ್ಲಾ ಖಾಲಿಯಾಯಿತು
ನಮ್ಮ ವ್ಯಾಪ್ತಿಯನೂ
ಅತಿಕ್ರಮಗೈದ ಎಲ್ಲಾ ಸಾಲದಾಯಿತು
ಮೊದಲೆಲ್ಲ ಹೀಗಿರಲಿಲ್ಲ
ಹಸಿರೇ ನಮ್ಮ ಉಸಿರಾಗಿತ್ತು
ನಾವಿರುವ ಜಾಗದಲ್ಲೇ ನಮಗೆ
ದಂಡಿಯಾಗಿ ಆಹಾರ ಸಿಕ್ಕುತ್ತಿತ್ತು
ನೆಲವೆಲ್ಲವೂ ಬರಿದಾಗಿ
ಮರದೆಲೆಯ ಅರಸುತ
ಮೇಲೆ ಮೇಲೆ ಜಿಗಿದು
ಹೊಟ್ಟೆ ತುಂಬಿಸಿಕೊಳ್ಳಬೇಕಿದೆ
ಹಸಿವಿಗಾಗಿ ಶಕ್ತಿ ಮೀರಿ
ಸಾಧಿಸಬೇಕು ಹಿಡಿದ ಗುರಿ
ಇದೇ ನಿತ್ಯದ ಗೋಳು
ನೀಗದು ಹಸಿವಿನ ಗೀಳು
0239ಪಿಎಂ15052019
*ಅಮು ಭಾವಜೀವಿ*
No comments:
Post a Comment