Friday, June 14, 2019

*ಅಗೋಚರ ಅನುಬಂಧ*

ನನ್ನ ಹೆಗಲ ಮೇಲೆ ನಿನ್ನ ಕೈ
ನಿನ್ನ ಬೆನ್ನ ಹಿಂದೆ ನನ್ನ ಕೈ
ಎರಡೂ ಕೈ ನನ್ನದೇ ಅಲ್ಲವೇ
ಅದುವೆ ನನ್ನೊಳಗಿನ ನಾನು

ನೊಂದಾಗ ಕಣ್ಣೊರೆಸುತ
ಸೋತಾಗ ಬೆನ್ನು ತಟ್ಟುತ
ಮತ್ತೆ ಮತ್ತೆ ಭರವಸೆ ಕುಸಿದಾಗ
ಎತ್ತಿ ನಿಲ್ಲಿಸಿದ ಕೈ ಅದು ನಾನೇ

ಒಂಟಿತನದ ಪಯಣದಲ್ಲಿ
ಮುನ್ನುಗುವ ಛಲ ತುಂಬುವ
ಆತ್ಮವಿಶ್ವಾಸದ ಅಂತಃಕರಣ
ನೀಡಿದ್ದು ನನಗೆ ನಾನೇ

ಬೆನ್ನಿಗಿರಿಯುವವರು ಬೇಡ
ಬೆಂಬಲದ ನೆಪದಲ್ಲಿ ಕಾಲೆಳೆದು
ಮತ್ತೆ ಕೈ ನೀಡುವ ದುರಳರ
ಸಹವಾಸ ಬಯಸದ ನನ್ನೊಳಗಿನ ನಾನು

ಆ ಅಗೋಚರ ಅನುಬಂಧದ
ಅನುಸಂಧಾನವೇ ನನ್ನೊಳಗಿನ ನಾನು
ಜೊತೆ ಜೊತೆಗೆ ಹೆಜ್ಜೆಯನಿಡುವ
ನನ್ನೊಳಗಿನ ಸ್ನೇಹಿತ ನಾನೇ

1219ಪಿಎಂ19052019
ಅಮು ಭಾವಜೀವಿ

ಸರೋಜ ನಾಗರಾಜ ಅವರ ಪ್ರತಿಕ್ರಿಯೆ

ಈಗ ನಮಗೆ ನಾವೇ ಬುದ್ಫಿ , ತಿಳುವಳಿಕೆ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳಬೇಕು ಎನ್ನುವ ಕವಿ ಭಾವ ಚನ್ನಾಗಿದೆ ಸರ್

ಅನ್ಸಾಲ್ ಅವರ ಪ್ರತಿಕ್ರಿಯೆ

ಅಗೋಚರ ಅನುಬಂಧ... ನಿಜಕ್ಕೂ ಅಗೋಚರವೇ ಯಾಕೆಂದ್ರೆ ಯಾರಿಗೂ ಕೂಡ ತನ್ನೊಳಗೆ ಇರುವ ಅವನನ್ನ ಅರ್ಥ ಮಾಡಿಕೊಂಡು ಹೊಂದಿಕೊಂಡು ಹೋಗಲು ಬದುಕಲು ಸಾಧ್ಯವಿಲ್ಲ.... ಆದರೆ ಕವಿ ತನ್ನೊಳಗಿನ ನಾನುವಿನ ಜೊತೆ ಬದುಕಿನ ಹಾದಿ ಸುಗಮ ಗೊಳಿಸಿ ಸಾಗಿದ್ದಾರೆ.

ನಮ್ಮೊಳಗಿನ ನಾನು ಅದು ಆತ್ಮ..... ನಮ್ಮ ಜನನ ದಿಂದ ಮರಣದ ವರೆಗೆ ಜೊತೆ ಇರುವ ಸ್ನೇಹಿತ.... ಅವನ ಜೊತೆಗಿನ  ಸ್ನೇಹ ಅವನ ಜೊತೆಗಿನ ಬಂಧ ಸರಿ ಇದ್ದರೆ ನಂಗೆ ಯಾವುದು ಆತ್ಮಸ್ಥೈರ್ಯ ಕಡಿಮೆ ಆಗಲ್ಲ.... ಗುರಿಯೂ ತಪ್ಪಲ್ಲ

ಅರ್ಥ ಮಾಡಿ ಕೊಂಡವರಿಗೆ ಬಹಳಷ್ಟು ಅರ್ಥ ಕೊಡುವ ಕವಿತೆ ...https://m.facebook.com/story.php?story_fbid=706196629809459&id=325773437851782

No comments:

Post a Comment