Friday, June 14, 2019

*ಕೆಟ್ಟು ಹೋಗುವ ಮೊದಲು*

ಸಂಜೆಯಾಗುತಿದೆ
ಕತ್ತಲು  ಕವಿಯುತಿದೆ
ಎಲ್ಲಿರುವೆ ನಲ್ಲ ಕಾಣದೆ
ದುಂಬಿಗಳು ಸುತ್ತುತಿವೆ
ಆಧರಗಳ ಮುತ್ತುತಿವೆ
ಎಲ್ಲಿರುವೆ ನಲ್ಲ ಕಾಣದೆ

ಒಂಟಿ ಸುಮದ ಮೇಲೆ
ತುಂಟ ಕಣ್ಣುಗಳ ಸಾಲೆ
ಬಿಟ್ಟುಬಿಡದೆ ನಾಟಿವೆ
ಮನ್ನಣೆಯೇ ತೋರುತ್ತಿಲ್ಲ
ರಕ್ಷಣೆಗೆ ಯಾರೂ ಇಲ್ಲ
ಎಲ್ಲಿರುವೆ ನಲ್ಲ ಕಂಗಾಲಾಗಿರುವೆ

ಹೆಜ್ಜೆ ಮುಂದಿಟ್ಟರೆ ಕಂದಕ
ಹೆಜ್ಜೆ ಹಿಂದಿಟ್ಟರೆ ಕಾಮುಕ
ಆಡಕೊತ್ತಲಿ ಸಿಕ್ಕಿಕೊಂಡಿರುವೆ
ಮುಂದೆ ಓಡುತ್ತಿದೆ ಸಮಯ
ಹಿಂದೆ ಕಾಡುತಿದೆ ಭಯ
ಎಲ್ಲಿರುವೆ ನಲ್ಲ ಹೆದರಿರುವೆ

ನಿನ್ನನ್ನೇ ನಂಬಿ ಬಂದಿರುವೆ
ನೀ ಕಾಣದೆ ಅಂಜಿ ನಿಂತಿರುವೆ
ಬೇಗ ಪ್ರತ್ಯಕ್ಷವಾಗು ಕಣ್ಣ ಮುಂದೆ
ಬಿಟ್ಟ ಮನೆ ಬಲು ದೂರ
ಕೊಟ್ಟ ಮನಸೀಗ ಭಾರ
ಕೆಟ್ಟು ಹೋಗುವ ಮೊದಲು ಬಾರ

06:37ಪಿಎಂ27052019

*ಅಮು ಭಾವಜೀವಿ*

No comments:

Post a Comment