Friday, June 14, 2019

*ಭಾವಯಾನ ೧೨*

ಚಿಲಿಪಿಲಿಯೆಂದು ಉಲಿವ
ಹಕ್ಕಿಗಳ ಇನಿದನಿ ಗಾನ
ಕಳೆದಿತ್ತು ಇರುಳ ನೀರವತೆಯ
ಮುಂಜಾನೆಯ ಉಷೆಯ
ಕಿರಣ ಸೋಕಲು ಎಚ್ಚೆತ್ತ
ಜಗದ ಭಾವಯಾನದಾರಂಭ
ದಿನದ ಪೂರ ನವೋಲ್ಲಾಸದ
ಜೀವಕಳೆಯ ತುಂಬುತಿದೆ
ಈ ಹೊತ್ತಿನ ಸವಿಭಾವದ ಸ್ಪೂರ್ತಿ ಸೆಲೆ

0531ಎಎಂ30052019

*ಅಮು ಭಾವಜೀವಿ*

No comments:

Post a Comment