*ಭಾವಯಾನ ೧೧*
ವಸಂತದ ಚಿಗುರು ಬಲಿತು
ವರ್ಷಧಾರೆಗಾಗಿ ಹಂಬಲಿಸಲು
ಮುಂಗಾರಿನ ಅಭಿಷೇಕಕೆ
ಇಳೆ ತಣಿದು ಸಂಭ್ರಮಿಸಲು
ಮಣ್ಣ ವಾಸನೆಯ ಕಂಪನು
ಸವಿಯಲು ಹೊರಟಿದೆ
ಕವಿಮನದ ಈ ಭಾವಯಾನ
ಎಂದೆಂದಿಗೂ ನವ ಚೇತನ
ಬುವಿಯ ಮೇಲಿನ ಈ ಜೀವನ
0643ಎಎಂ29052019
*ಅಮು ಭಾವಜೀವಿ*
ಮೂಡಣದ ಬಾನಲ್ಲಿ
ರವಿಯುದಯದ ಆಗಮನ
ಮೂಡುತಿಹ ಬಾನುಲಿಯಲಿ
ಭಕ್ತಿ ಭಾವದ ಆರಾಧನ
ಮುಂಜಾನೆಯ ಇಬ್ಬನಿಯಲಿ
ಹೊಳೆವ ಕಾಮನಬಿಲ್ಲಿನ ಚಿತ್ರಣ
ನಿದಿರೆಯಿಂದೆದ್ದ ಮನಕೆ
ಸವಿಭಾವವ ಮೂಡಿಸಿತು
ಈ ಭಾವಯಾನ
ಶುಭೋದಯ
ಅಪ್ಪಾಜಿ ಎ ಮುಸ್ಟೂರು
No comments:
Post a Comment