Friday, June 14, 2019

*ಜ್ಞಾನದ ಬಾಗಿಲು ತೆರೆದಿದೆ*

ರಜೆಯು ಮುಗಿಯಿತು
ಶಾಲೆಯು ತೆರೆಯಿತು
ಬನ್ನಿರಿ ಮಕ್ಕಳೇ ಶಾಲೆಯ ಕಡೆಗೆ
ಗೆಳೆಯರ ಕರೆತನ್ನಿರಿ ನಿಮ್ಮಯ ಜೊತೆಗೆ

ತಳಿರು ತೋರಣಗಳ ಕಟ್ಟಿ
ಶೃಂಗಾರಗೊಂಡಿದೆ ಶಾಲೆ
ಪಠ್ಯಪುಸ್ತಕ ಸಮವಸ್ತ್ರವ
ಗುರುಗಳು ಕೊಡುವರು ಬನ್ನಿರಿ ಈಗಲೇ

ಕ್ಷೀರಭಾಗ್ಯದ ಹಾಲು ಕುಡಿದು
ಮಧ್ಯಾಹ್ನದ ಬಿಸಿಯೂಟ ಸವಿದು
ಆಡಿ ಕುಣಿಯುತ್ತ ನಲಿದು
ಆಟಪಾಠಗಳಲ್ಲಿ ತೊಡಗುವ ಬನ್ನಿ

ಶಾಲಾ ಪ್ರಾರ್ಥನೆ ಮೊದಲ್ಗೊಂಡು
ಪಾಠ-ಪ್ರವಚನ ಆರಂಭಗೊಂಡು
ಕಲಿಯುತ್ತ ನಲಿಯುತ ಜಾಣರಾಗಲು
ಶಾಲೆಯತ್ತ ನೀವು ಓಡೋಡಿ ಬನ್ನಿ

ಜ್ಞಾನದ ಬಾಗಿಲು ತೆರೆದಿದೆ ಎಂದು
ಅಕ್ಕ-ಪಕ್ಕದ ಮಕ್ಕಳ ಕರೆದು
ಉಚಿತ ಸವಲತ್ತುಗಳ ಪಡೆದು
ವಿದ್ಯೆಯ ಪಡೆಯಲು ಶಾಲೆಗೆ ಬನ್ನಿರಿ ಇಂದೆ

ಗುರುಗಳು ನಿಮಗಾಗಿ ಕಾದಿಹರು
ಬಗೆಬಗೆ ಪಾಠೋಪಕರಣ ತಂದಿಹರು
ಖುಷಿಯಿಂದ ನೀವು ಕಲಿಯಲು
ಇಂದೇ ಶಾಲೆಗೆ ಬನ್ನಿರಿ

0217ಪಿಎಂ28052019

*ಅಮುಭಾವಜೀವಿ*

No comments:

Post a Comment