Friday, June 14, 2019

*ಹಂಬಲ*

ಚುಚ್ಚು ಮಾತುಗಳಿಗಿಂತ
ಮೆಚ್ಚುವ ಮಾತು ಕೇಳುವಾಸೆ
ಅಭಿಮಾನದ ಮಾತಿಗಿಂತ
ಅಂತರಂಗದ ಮಾತಿಗೆ ಬೆಲೆ ಕೊಡುವೆ
ನೊಂದು ಕೂರುವುದಕ್ಕಿಂತ
ನೋವ ಮರೆತು ಬಾಳುವೆ
ಎಲ್ಲಾ ಕಳೆದುಕೊಂಡಾಗ
ಸ್ನೇಹಕಾಗಿ ಹಂಬಲಿಸುವೆ

*ಅಮು ಭಾವಜೀವಿ*

ಸರೋಜ ನಾಗರಾಜ ಅವರ ಪ್ರತಿಕ್ರಿಯೆ

ಅದ್ಬುತ ಸರ್

ಸುಂದರ

ಚಕ್ರವರ್ತಿ ಅವರ ಪ್ರತಿಕ್ರಿಯೆ

ಚೆನ್ನಾಗಿದೆ ಸರ್💓💐👌

*ಬಾ*

ಮಾತು ಮೌನದ ಆಳಾಗಿ
ಹೃದಯದ ಅಳಲನ್ನು ಕೇಳದಾಗಿ
ಪ್ರೀತಿ ತಾನೇ ಸೋತು ಹೋಗಿ
ಸ್ನೇಹ ಅವಮಾನಕೆ ತುತ್ತಾಗಿ
ಬಾಳು ಬತ್ತಿದ ಒರತೆಯಾಗಿ
ಮರಪೂರಣಗೈಯ್ಯಲು ಬಾ ಮಳೆಯಾಗಿ

ಅಮು ಭಾವಜೀವಿ

ಅಮರ್ ಪ್ರಿನ್ಸ್ ಅವರ ಪ್ರತಿಕ್ರಿಯೆ

ಸುಂದರವಾಗಿದೆ

ಅನ್ಸಾಲ್ ಅವರ ಪ್ರತಿಕ್ರಿಯೆ

ಸ್ನೇಹ ಎಲ್ಲಾ ಕಳೆದು ಕೊಂಡಾಗ ನೆನಪಾಗುವುದಲ್ಲ.........  ಹಂಬಲಿಸುವುದು ಅಲ್ಲ  ಸ್ನೇಹ ನಿರಂತರ ಕಷ್ಟ ಸುಖದಲ್ಲಿ..... ಸದಾ ಒಂದಾಗಿ 

ಕವಿ ಭಾವ ಸೊಗಸಾಗಿದೆ

No comments:

Post a Comment