ಅಭಿಮತಕೆ ಅಹಂ
ಅಡ್ಡಿ ಪಡಿಸದಿರೆ
ಅನುಬಂಧ ಮೂಡಿ
ಬದುಕಾದೀತು ಎತ್ತಿನಗಾಡಿ
ನೂರಾರು ಸುತ್ತಿನ ಕಷ್ಟದ
ಚಕ್ರದಿ ಕೂತು ಮಡಿಕೆಯ
ರೂಪ ತಳೆದು ತಣ್ಣನೆಯ
ಪಾನಕದ ಸವಿ ಬಾಳು ಬಾಳೋಣ
ಅಮು ಭಾವಜೀವಿ
ಜೀವನದ ಒಡನಾಡಿ
ಜೊತೆ ಜೊತೆಗೆ ಓಡಾಡಿ
ಬಾಳ ಪಯಣವ ಮುಗಿಸೋಣ
ಮುಟ್ಟಿ ಸುಖದ ನಿಲ್ದಾಣ
ಅಮು
ಔತಣ ನೀಡುತಿರುವೆ
ಜೀವನದ ಫಲವಿದು
ಹಣ್ಣಾಗುವ ಮುನ್ನ
No comments:
Post a Comment