Friday, June 14, 2019

*ಭಾವಯಾನ ೧೫*

ಈ ಇರುಳು ಇನ್ನೂ
ಅರ್ಧ ಸರಿದಿಲ್ಲ ಆಗಲೇ
ದಾಳಿಯಿಡಲು ಸಜ್ಜಾದ
ಮಳೆ ಮೋಡಗಳ ಜೊತೆ
ಭೀಕರ ಬಿರುಗಾಳಿ ದಾಳಿ
ಅದಕೂ ಸವಾಲೊಡ್ಡಲು
ಮಿಂಚು ಗುಡುಗುಗಳ ಆರ್ಭಟ
ಆಲಿಕಲ್ಲಿನ ಸಮೇತ ಸುರಿದ
ಮಳೆ ಇಳೆಯ ಬಿಸಿ ತಗ್ಗಿಸಿ
ಭೋರ್ಗರೆದು ಹರಿವ ಕಿರು ತೊರೆಗೆ
ಜೀವ ತುಂಬಿ ಸಂಭ್ರಮಿಸುತ
ಈ ಭಾವಯಾನಕೆ ಅನುಭವದ
ಸಿಂಚನದಿ ಮುಂಜಾನೆಯ ಬರುವಿಕೆಯ
ಜತನದಿಂದ ಕಾಯುತಿದೆ ನಿಸರ್ಗ

1120ಪಿಎಂ02062019

ಅಮು ಭಾವಜೀವಿ

*ಭಾವಯಾನ ೧೬*

ಮುಂಜಾನೆಯ ವೇಳೆಯಲ್ಲಿ
ಮೋಹನ ಮುರಳಿ ಕರೆಯಿತು
ಭಾವಯಾನದ ಹಾದಿಯಲ್ಲಿ
ಕಾಮನಬಿಲ್ಲಿನ ರಂಗನು ಎರಚಿತು
ಎಲ್ಲೋ ಜಾರುವ ಮನವ
ಮುದಗೊಳಿಸುವ ಗಾನ ಚೆಂದ
ಇರುಳು ಕಳೆದ ಅಂಗಳದಿ
ಭಾವ ಸುಮವರಳಿ ಸೆಳೆಯಿತು
ತಂಗಾಳಿಯ ಹಿತ ಸ್ಪರ್ಶಕೆ
ತೂಗು ಮಂಚದ ಮೇಲೆ ಕೂತು
ಸಂಭ್ರಮ ತಂತುಈ ದಿನದ ಪಯಣ

No comments:

Post a Comment