Friday, June 14, 2019

*ಭಾವಯಾನ ೧೪*

ಮೋಡದ ಮರೆಯಿಂದ
ರವಿ ಮೂಡಿ ಬರುವ ಹೊತ್ತಿಗೆ
ಮಂಜಿನ ಹನಿಗಳ ಸ್ವಾಗತ
ಇರುಳ ಸರಿಸಿ ಉದಿಸಿ ಬಂದ
ಭಾಸ್ಕರನ ಭಾವಯಾನಕೆ
ಹಕ್ಕಿಗಳಿಂಚರದ ಸಂಗೀತ
ಮೊಗ್ಗು ಬಿರಿದರಳಿ ಕಂಪು ಹರಡಿ
ದುಂಬಿ ಸುತ್ತಲೂ ಹಾರಾಡಿ
ಮಧು ಹೀರುವ ಸಂಭ್ರಮ
ಮುಂಜಾನೆಯ ಈ ಸಮಯ
ಮುದಗೊಳಿಸುವ ಪರಿಯ
ಪದಗಳಲಿ ಹಿಡಿಯಲಿ ಹೇಗೆ

0618ಎಎಂ01062019

*ಅಮು ಭಾವಜೀವಿ*

No comments:

Post a Comment