*ನಿನ್ನ ಸಾರಥ್ಯದಲ್ಲಿ*
ಬದುಕೋಕೆ ನೂರು ಹಾದಿಗಳು
ಬವಣೇನ ಮರೆಸಿದ ಸಾಲುಗಳು
ನಿನ್ನ ಪ್ರೀತಿಯ ನೆರಳು
ನನ್ನ ಬದುಕಿನ ಭರವಸೆಯ ಬೆರಳು
ನೋವುಗಳು ಸಾವಿರ ಬರಲಿ
ನಿನ್ನ ಮಮತೆಯ ಸೂರು ನನಗಿರಲಿ
ಕಷ್ಟಗಳ ಪ್ರವಾಹವೇ ಉಕ್ಕಲಿ
ಆಸರೆಯ ತೀರ ನನಗಿರಲಿ
ಚುಚ್ಚುವ ಮಾತುಗಳು ಅನೇಕ
ನನಗೆ ನೀನು ಸುಮದ ಪ್ರತೀಕ
ಕೊಲ್ಲುವ ಕೈಗಳು ಹತ್ತಾದರೂ
ಕಾಯುವ ನಿನ್ನ ಕೈ ಇದೆಯಲ್ಲ ಒಂದಾದರೂ
ಏರುಪೇರುಗಳು ಏನೇ ಬರಲಿ
ಎದುರಿಸುವ ಛಲ ತುಂಬಿದೆ ನೀನು
ಎದೆಗುಂದುವ ಮಾತೇ ಇಲ್ಲ
ಎದುರಿಗೆ ನೀನಿರಲು ಸೋಲೇ ಇಲ್ಲ
ಈ ಬದುಕು ನೀನೆ ಕೊಟ್ಟ ಭಿಕ್ಷೆ
ಭಯವಿಲ್ಲ ಇರಲು ನಿನ್ನ ಪ್ರೀತಿ ರಕ್ಷೆ
ನನ್ನ ಸಮಬಲದ ಹೋರಾಟಕ್ಕೆ
ಸಮರಸದ ಸ್ಪೂರ್ತಿಯೇ ಕಾಣಿಕೆ
ಸಾಕು ಈ ಜನ್ಮಕ್ಕಿಷ್ಟು
ಸಾಸಿವೆ ಸುಖವಾದರೂ ಬೆಟ್ಟದಷ್ಟು
ಮರಳುವ ಮಾತೇ ಇಲ್ಲ
ಮುನ್ನುಗ್ಗುವೆ ನಿನ್ನ ಸಾರಥ್ಯದಲ್ಲಿ
0559ಎಎಂ01062019
*ಅಮು ಭಾವಜೀವಿ*
No comments:
Post a Comment