*ನೀ ಏಕೆ ಹೀಗಾದೆ?*
ಏಕೆ ನೀನು ಹೀಗಾದೆ
ಓ ಬುದ್ಧಿವಂತ ಮಾನವ
ಮಾನವೀಯತೆಯನ್ನೇ ಮರೆತು
ನೀನಾದೆ ಏಕೆ ದಾನವ
ನಿನ್ನ ಆಡಿಸಿ ಬೆಳೆಸಿದವರನ್ನೇ
ಏಕೆ ನೀನು ದೂರುವೆ
ಆ ಋಣದ ಭಾರ ನಿನ್ನ ಮೇಲೆ ಇಲ್ಲವೇ
ನಿನಗೆ ಕೈತುತ್ತು ಕೊಟ್ಟವರನ್ನೇ
ಕೊಲ್ಲುವ ಮನಸು ಮಾಡುವೆ
ನಿನ್ನ ಹೃದಯ ಇಷ್ಟೊಂದು ಕಲ್ಲಾಯಿತೇಕೆ
ನಿನಗೆ ಕಾಲು ನೋವೆಂದು
ಹೆಗಲ ಮೇಲೆ ಹೊತ್ತುದ ಮರೆತೆಯ
ಕಾಲದ ಈ ಯಾನದಲ್ಲಿ
ನಿನಗೆ ಕಷ್ಟ ಬೇಡವೆಂದು
ಎಲ್ಲಾ ತಾವೇ ಸಹಿಸಿದರಂದು
ಆ ತ್ಯಾಗವ ಮರೆತೆಯ ನೀನಿಲ್ಲಿ
ಮನುಷ್ಯ-ಮನುಷ್ಯರ ನಡುವೆ
ಇರಲಿ ಪ್ರೀತಿಯ ಸೇತುವೆ
ಈ ಜೀವನ ಸಾಗರ ದಾಟಲು
ದ್ವೇಷವ ಮರೆತು ಸ್ನೇಹದಿ ಸೋತು
ಬಂಧ ಅನುಬಂಧ ಬೆಸೆದು
ಆನಂದದಿ ನೀ ಬಾಳು
ನಿನ್ನೆಯ ಎಂದು ಮರೆಯದಿರು
ನೀನಿಂದು ಕುರುಡನಾಗದಿರು
ನಾಳೆಯ ಆ ಭ್ರಮೆಯಲ್ಲಿ
ನಾವಿಲ್ಲಿ ಬದುಕಲು ಬಂದಿಹೆವು
ಹೊರಡುವಾಗ ಬರಿಗೈಯಾಗುವೆವು
ಒಳ್ಳೆಯತನ ಉಳಿಯುವುದಿಲ್ಲಿ
0550ಪಿಎಂ31052019
*ಅಮು ಭಾವಜೀವಿ*
ಮಹದೇವ್ ಅವರ ಪ್ರತಿಕ್ರಿಯೆ
+91 74113 99610: ಜನ್ಮ ಕೊಟ್ಟ ತಂದೆ - ತಾಯಿಯನ್ನು ದೂರುವ ಹಾಗೂ ಮಾನವೀಯತೆ ಮರೆತವರಿಗೆ ನಿಮ್ಮ ಕವನದ ಮೂಲಕವೇ ಅದ್ಭುತವಾಗಿ ಸಂದೇಶವನ್ನು ನೀಡಿದ್ದೀರಿ ಸರ್
ಮಧುಮತಿ ಪಾಟೀಲ ಅವರ ಪ್ರತಿಕ್ರಿಯೆ
ಸೂಪರ್ ಸರ್,ತುಂಬಾ ಚನ್ನಾಗಿದೆ
No comments:
Post a Comment