*ಭಾವಯಾನ ೧೩*
ಉಷೆ ಮೂಡುವ ಮೊದಲೇ
ಎದ್ದ ಹೆಂಗಳೆಯರು ಅಂಗಳವ
ಗುಡಿಸಿ ತುಳಸಿಯನು ಪೂಜಿಸಿ
ತಳಮಳದ ಬದುಕನ್ನು
ತಹಬಂದಿಗೆ ತರಲು
ತಂಪು ಹೊತ್ತಿನಲ್ಲಿ ಇಂಪು
ದನಿಯನಾಲಿಸುತಲಿ
ವಾಯುವಿಹಾರಕ್ಕೆ ಹೋಗುವಾಗ
ನಿಸರ್ಗ ಚೆಲುವಿನನಾವರಣ
ಸವಿವ ಮನದ ಭಾವಯಾನಕೆ
ಹೊಸ ಸ್ಪೂರ್ತಿಯ ತಂತು ಈ ಬೆಳಕು
0611ಎಎಂ31052019
*ಅಮು ಭಾವಜೀವಿ*
No comments:
Post a Comment