* ಏಕೆ ಕಾಡುತ್ತಿರುವೆ
ಏಕೆ ಕಾಡುತಿರುವೆ ನಲ್ಲೆ
ನಿನ್ನನೇ ಹುಡುಕುತಿರುವೆ ಇಲ್ಲೆ
ದೂರ ದಿಗಂತದಿ ಇರುಳು
ಮೆಲ್ಲ ಜಾರಿ ಬರುತ್ತಿರಲು
ಮೂಡುವ ಬೆಳ್ಳಿಚುಕ್ಕಿ ನೀನಾಗಿರಬಹುದೇ
ತಂಗಾಳಿ ತೀಡುತ್ತಿರುವಾಗ
ತಲೆದೂಗುವ ಎಳೆ ಪೈರಿನ
ವೈಯಾರವು ನಿನ್ನದಾಗಿರಬಹುದೇ
ಈ ರಾತ್ರಿಯ ನಿದಿರೆಗೆ
ಬೆಳದಿಂಗಳ ಹಾಸಿ ಮಲಗಿಸೋ
ಮಾತೃಹೃದಯಿಯೇ ನೀನು
ಬೇಸರದ ತೀರದ ದಾಹಕೆ
ಬಳುಕುವಲೆಗಳಿಂದ ಮುದ್ದಿಸಿ
ಮತ್ತೆ ಚೈತನ್ಯ ತುಂಬಿದವಳಲ್ಲವೇ ನೀನು
ಅಂಗಾಲ ಹೊಕ್ಕ ಮುಳ್ಳಿನಂತೆ
ಮತ್ತೆ ಮತ್ತೆ ನೆನಪಾಗಿ ಕಾಡುವ
ಒಲವಿನ ಪ್ರಿಯತಮೆ ನೀನಲ್ಲವೇ
ಮುಂಜಾನೆಯ ಮಂಜಿನ ಹನಿಗಳಲಿ
ಹೊಳೆಯುವ ರವಿ ಕಿರಣಗಳಂತೆ
ಪ್ರೀತಿಯ ದನಿಯಾದವಳು ನೀನಲ್ಲವೇ
ಏಕಾಂತದ ವಿರಹ ಭಾವಕೆ
ದೂರದಿ ನಿಂತು ಸಂತೈಸುವ
ಮನದನ್ನೆ ಹೀಗೆ ಕಾಡುವೆ ಏಕೆ
ಎಲ್ಲಿದ್ದರೂ ಬೇಗ ಬಂದುಬಿಡು
ತಿಂಗಳಿನ ಅಂಗಳದಲ್ಲಿ ಸಂಗಾತಿ
ಒಂದಾಗೋಣ ಆನಂದಿಸೋಕೆ
08pm29052019
*ಅಮು ಭಾವಜೀವಿ*
No comments:
Post a Comment