Friday, June 14, 2019

*ಈಗ ಮುಗಿಸಬೇಕಿದೆ*

ಇಳಿಸಂಜೆಯೊಳಗೆ ಇಳಿದು
ಹೋಗುವೆ ಮತ್ತೆ ಬರೆಯುವುದಕೆ
ಇಳಿ ವಯಸ್ಸಿನಲ್ಲಿ ಅಳಿದು
ಹೋಗುವೆ ಮತ್ತೆ ಬಾರದ ಲೋಕಕೆ

ದಿನವೆಲ್ಲ ನಾ ಬೆಳಗಿ
ದಣಿದು ನಡೆವೆ ವಿಶ್ರಾಂತಿಗೆ
ಜೀವನವೆಲ್ಲಾ ದುಡಿದು
ಮಡಿಯುವೆ ನೀ ಬರಿಗೈಯೊಳಗೆ

ನನ್ನದು ಅನಿವಾರ್ಯದ ಪಯಣ
ನಿನ್ನದು ಅರ್ಥಪೂರ್ಣ ಮರಣ
ನನಗೆ ತಪ್ಪದು ಎಂದೆಂದಿಗೂ
ಸಾರ್ಥಕತೆ ಪರಿಪೂರ್ಣತೆ ನಿನ್ನದು

ವಸುಧೆ ನನ್ನನೂ ನಿನ್ನನೂ
ಒಡಲೊಳಗಡಗಿಸಿಕೊಳ್ಳುವಳು
ಅದೇ ಬೆಳಗು ಅದೇ ಬೇಕು ನನದು
ಅದರ ನಡುವೆ ಸುಖದ ಬದುಕು ನಿನ್ನದು

ವಿದಾಯದ ಈ ಭಾವಯಾನ
ನಮ್ಮಿಬ್ಬರ ಕರೆದೊಯ್ದಿದೆ
ಸಂಭ್ರಮವೋ ಸಂಕಷ್ಟವೋ
ಸಹಿಸಿ ಈಗ ಮುಗಿಸಬೇಕಿದೆ

0421ಎಎಂ03062019

*ಅಮು ಭಾವಜೀವಿ*

No comments:

Post a Comment