Friday, June 14, 2019

*ಪರಿಸರ ದಿನವೆಂಬುದು*

ಗಿಡ ನೆಟ್ಟು ಮರೆತುಬಿಟ್ಟು
ಹೋಗದಿರಿ ನೀವೆಲ್ಲ
ಪರಿಸರ ದಿನವೆಂಬುದು
ಒಂದು ದಿನದ ಸಂಭ್ರಮವಲ್ಲ

ನೆಟ್ಟ ಗಿಡದ ಬಳಿ
ನಿತ್ಯವೂ ಹೋಗೋಣ
ನೀರು ಹಾಕಿ ರಕ್ಷಣೆಗೆ
ಬೇಲಿಯನಿಟ್ಟು ಸಲಹೋಣ

ಕೋಟಿ ಜನರಿರುವ ನಾಡಲ್ಲಿ
ಕೋಟೆಯಂತೆ ನಿಂತು
ನೆಟ್ಟ ಗಿಡ ಮರವಾಗುವ ತನಕ
ನಿಷ್ಠೆಯಿಂದ ಬೆಳೆಸೋಣ

ಪ್ರಕೃತಿಯ ಸೊಬಗನ್ನು ಮತ್ತೆ
ಮರು ಸೃಷ್ಟಿಗೆ ಶ್ರಮಿಸಬೇಕಿದೆ
ಪ್ರತಿಯೊಬ್ಬರ ಹೆಸರಿನಲ್ಲಿ ಒಂದು
ಮರ ಬೆಳೆಸಿ ಅಮರವಾಗಬೇಕಿದೆ

ನಮ್ಮ ಮುಂದಿನವರ ಬದುಕಿಗಾಗಿ
ನಾವಿಂದು ಸಸ್ಯ ಸಂಪತ್ತನ್ನು ಉಳಿಸಿ
ಅವರಿಗೂ ಅದನು ಅಳಿಸದಂತಹ
ನೈತಿಕ ಶಿಕ್ಷಣ ಕೊಡಬೇಕಿದೆ

ನಿಸರ್ಗದ ಮಡಿಲಲ್ಲಿ ಮತ್ತೆ
ಆ ಸಂಭ್ರಮವ ತರೋಣ
ಗಿಡ ಮರಗಳ ಹಸಿರೇ
ನಮ್ಮ ನಿತ್ಯದ ಉಸಿರೆಂದು ಸಾರೋಣ

0548ಪಿಎಂ05062019
*ಅಮು ಭಾವಜೀವಿ*

No comments:

Post a Comment