Friday, June 14, 2019

*ಭಾವಯಾನ ೧೮*

ಮಳೆಯ ಹನಿಗೆ
ಮುದದಿ ನೆನೆದ
ಇಳೆಯ ಈ ಸಂಭ್ರಮ
ನಿಸರ್ಗದ ಒಡಲಲಿ
ನವ ಚೇತನವ ತಂದ
ನೆಲ ಜಲದ ಈ ಸಂಗಮ
ಪ್ರಕೃತಿಯ ಈ ಸೊಬಗನ್ನು
ಅನುಭವಿಸುವ ಪ್ರತಿ ಜೀವದ
ಅನುಭಾವದ ಭಾವಯಾನ
ಕ್ಷಣ ಕ್ಷಣಕ್ಕೂ ಹೊಸ ತನ
ಹೊತ್ತು ತರುವುದೀ ಜೀವನ

*ಅಮು ಭಾವಜೀವಿ*
06062019

No comments:

Post a Comment