Friday, June 14, 2019

ಬಾಳ ರಮ್ಯ ಚೈತ್ರ ಗಾನ

ಬಾಳ ಹಾದಿಯ ನೆರಳಾಗಿ
ಒಂಟಿ ಜೀವನಕೆ ಜೊತೆಯಾಗಿ
ಬಂದೆ ನೀನು ವರವಾಗಿ
ನವ ವರ್ಷಗಳ ಕಳೆದೆ ಖುಷಿಯಾಗಿ

ಭಾಗ್ಯವಂತನು ನಾನು
ನಿನ್ನ ಕೈ ಹಿಡಿದ ಘಳಿಗೆ
ಬದುಕಿಗೊಂದು ನೆಲೆ ಸಿಕ್ಕು
ಬದಲಿಸಿತು ನಮ್ಮ ಬದುಕಿನ ದಿಕ್ಕು

ಜಾಗರೂಕತೆಯಿಂದ ಬಾಳೋಣ
ನಾನು ನೀನು ಸುಖವಾಗಿರೋಣ
ಭಾವನೆಗಳ ಮುನ್ನುಡಿ ಬರೆದು
ಭಾಗ್ಯದ ಬಾಗಿಲ ತೋರಣವಾಗೋಣ

ಬದುಕಿಗೊಂದು ಬೆಲೆ ಬಂತು
ಸುಖಕೊಂದು ನೆಲೆಯಾಯ್ತು
ನಿನ್ನಿಂದ ನನಗೆ ನನ್ನಿಂದ ನನಗೆ
ಬಾಳಲು ಪ್ರೇರಕ ಶಕ್ತಿಯಾಯ್ತು

ಹೀಗೆ ಸಾಗಲಿ ನಮ್ಮ ಜೀವನ
ಬಾಳಾಗಲಿ ಸುಂದರ ಕವನ
ನಮ್ಮ ಈ ಸಹಯಾನ
ನವ ವಸಂತದ ರಮ್ಯ ಚೈತ್ರ ಗಾನ

0719ಪಿಎಂ08052019
ಅಮು ಭಾವಜೀವಿ

ಮಧುಮತಿ ಪಾಟೀಲ್ ಬಳ್ಳಾರಿ ಅವರ ಪ್ರತಿಕ್ರಿಯೆ

ಸರ್ ಸಂಸಾರವನ್ನು ಸಸಾರವಾಗಿ ತೆಗೆದುಕೊಂಡರೆ ಬಾಳೊಂದು ಸುಂದರ ಕವನವಾಗುತ್ತದೆಂದು ಸ್ಪಷ್ಟವಾಗಿ ಬಿಂಬಿಸಿದ್ದೀರಾ,ಸೂಪರ್.ಙ

No comments:

Post a Comment