*ಗಜಲ್*
ನನ್ನದೆಂಬುದೆಲ್ಲವೂ ನಿನ್ನದೇ
ನನ್ನ ಬದುಕಿನ ನಲಿವೂ ನಿನ್ನದೇ
ನಡೆವ ಹಾದಿಯ ತುಂಬ
ಬಿಟ್ಟು ಹೋದ ನೆನಪೆಲ್ಲವೂ ನಿನ್ನದೇ
ಒಂಟಿ ಜೀವದ ಯಾತ್ರೆಯಲ್ಲಿ
ನೆರಳಿಲ್ಲದ ನೋವೆಲ್ಲವೂ ನಿನ್ನದೇ
ಪ್ರೀತಿಯಲಿ ಇಣುಕಿ ನೋಡಿದ
ಅನುಮಾನದ ವೇಷವೂ ನಿನ್ನದೇ
ಸ್ನೇಹದ ಸಂಕೋಲೆಯಲ್ಲಿ
ಸಂದೇಹ ಪಟ್ಟ ಸ್ವಭಾವವೂ ನಿನ್ನದೇ
ಬದುಕಿನ ಅಂತಿಮ ಯಾತ್ರೆಯಲಿ
ಅಮುವಿನಂತರಂಗವ ಕಲಕಿದ ಭಾವವೂ ನಿನ್ನದೇ
0147ಎಎಂ01062018
*ಅಮು ಭಾವಜೀವಿ*
No comments:
Post a Comment