ಗಜಲ್ 21
ಜನದಟ್ಟಣೆಯ ಅಟ್ಟಣಿಗೆ ಮೇಲೆ ನಿಂತು ನೀ
ಕಣ್ಣ ಸನ್ನೆಯಲಿ ಕರೆದೆ ಮರೆಯಲಿ ನಿಂತು ನೀ
ಸಂಜೆ ಮಬ್ಬುಗತ್ತಲಿನಲ್ಲಿ ನಿನ್ನ ಮೇಲೆ ವೈಯಾರವ
ಕಂಡು ಮದಿರೆಯ ಅಮಲೇರಿಸಿದೆ ಅಲ್ಲಿ ನಿಂತು ನೀ
ಈ ಇರುಳ ನಶೆಯಲ್ಲಿ ಮುಳುಗಿ ಮೇಲೆದ್ದಾಗ
ಮಧುಶಾಲೆಯ ತೆರೆದು ಕರೆದೆ ಅಲ್ಲಿ ನಿಂತು ನೀ
ನಿನ್ನ ಮೊಹಬ್ಬತ್ತಿನ ಜನ್ನತ್ತಿಗಾಗಿ ಜಗುಲಿಯೇರಿ
ಬಂದಾಗ ಮಧು ಬಟ್ಟಲ ಸುರೆ ಸುರಿದೆ ನಿಂತು ನೀ
'ಅಮು'ವಿನಭಿಲಾಷೆಯ ತೀರಿಸಲು ಕರೆದೆ
ಖಬರಸ್ತಾನದ ಗೋರಿ ಮೇಲೆ ನಿಂತು ನೀ
0732ಪಿಎಂ21052019
ಅಮು ಭಾವಜೀವಿ
No comments:
Post a Comment