*ಬಣ್ಣಗಳ ಅಭಿಷೇಕ*
ಹೋಳಿ ಹುಣ್ಣಿಮೆಯ ಅಭಿಷೇಕ
ಧರೆಗೆ ಬಣ್ಣಗಳ ಪುಳಕ
ಚೈತ್ರಕಾಗಿ ಚಿಗುರನು ತಂದ
ವಸಂತ ಹಚ್ಚಿದ ಹಸಿರು ಬಣ್ಣ
ಮುಸ್ಸಂಜೆಯ ಗೋಧೂಳಿಗೆ
ಪಡುವಣ ದಿಗಂತವಾಯಿತು ಕೇಸರಿ ವರ್ಣ
ಉಸೆ ಮೂಡುವ ಮುಂಜಾನೆ ಕಿರಣ
ಅಲ್ಲೂ ರಂಗಾವಳಿ ರಸದೌತಣ
ಇರುಳು ಕೂಡ ಮುದವೆನಿಸೋ
ಕಡು ಕಪ್ಪಿನ ಆವರಣ
ಶಶಿ ಪ್ರಶಾಂತ ಬೆಳದಿಂಗಳಲ್ಲಿ
ವಿಹರಿಸುತ್ತಿದೆ ಶ್ವೇತ ವರ್ಣ
ಬಗೆಬಗೆ ಬಣ್ಣದ ಹೂವುಗಳು
ಧರೆಯ ಚಂದದ ಆಭರಣ
ಬಣ್ಣಗಳಿಂದಲೇ ನಿಸರ್ಗಕ್ಕೆ ಸೊಬಗು
ಬಣ್ಣಗಳಿಗಾಗಿಯೇ ನಿಸರ್ಗದ ಬದುಕು
ಪ್ರತಿ ಹೃದಯದ ಕನಸುಗಳಿಗೆ
ಬಣ್ಣಗಳದ್ದೇ ಮಧುರ ಲೇಪನ
ಬಣ್ಣಗಳಿಲ್ಲದ ಲೋಕದಿ
ಚೆಲುವು ಇರಲು ಸಾಧ್ಯವಿಲ್ಲ
ಬಣ್ಣಗಳ ಆ ಸಂಭ್ರಮ ಸವಿಯದ
ಯಾವೊಂದು ಮನಸ್ಸು ಭೂಮಿಯಲ್ಲಿ ಇಲ್ಲ
0637ಎಎಂ22032008
*ಅಮು ಭಾವಜೀವಿ*
No comments:
Post a Comment