Friday, June 21, 2019

*ಗಜಲ್*

ಪ್ರಜಾಪ್ರಭುತ್ವದ ಉಳಿವಿಗಾಗಿ ಮತ ಹಾಕಿ
ನಮ್ಮ ದೇಶದ ಉನ್ನತಿಗಾಗಿ ಮತ ಹಾಕಿ

ದೇಶದ ಪ್ರಜ್ಞಾವಂತ ಪ್ರಜೆಗಳು ನೀವೆಲ್ಲ
ನಿಮ್ಮ ಹಕ್ಕಿನ ಚಲಾವಣೆಗಾಗಿ ಮತ ಹಾಕಿ

ಪೊಳ್ಳು ಭರವಸೆಗಳಿಗೆ ಮರುಳಾಗದೆ
ದೇಶದ ಒಳಿತಿಗಾಗಿ ಮತ ಹಾಕಿ

ಆಮಿಷಗಳಿಗೆ ಎಂದು ಬಲಿಯಾಗದೆ
ನಿಮ್ಮ ಆತ್ಮಗೌರವಕ್ಕಾಗಿ ಮತ ಹಾಕಿ

ಪ್ರಜೆಗಳೇ ಪ್ರಭುಗಳು ಎಂಬುದನ್ನು
ಸಾಬೀತು ಮಾಡುವುದಕ್ಕಾಗಿ ಮತ ಹಾಕಿ

ಬರುವ ಸಂಕಷ್ಟಗಳನ್ನೆಲ್ಲ ಎದುರಿಸಿ
ನೆಮ್ಮದಿಯ ಬದುಕಿಗಾಗಿ ಮತ ಹಾಕಿ

ಅಮುವಿನ ಅಂತರಂಗದ ಕಳಕಳಿ ಇದು
ನಿಮ್ಮದೇ ಜವಾಬ್ದಾರಿಯಾಗಿ ಮತ ಹಾಕಿ

22 ಮಾರ್ಚ್ 2019
0717 ಪಿಎಂ
*ಅಮು ಭಾವಜೀವಿ*

No comments:

Post a Comment