ಗಿರಿಯು ಕಳಚಿ ಬಿದ್ದಂತಾಯ್ತು
ಕಾರಿರುಳು ಕವಿದಂತಾಯ್ತು
ಕಾರ್ನಾಡರೆಂಬ ಮರ ಉರುಳಿ
ಕನ್ನಡ ಸಾಹಿತ್ಯ ಬಡವಾಯಿತು
ಯಯಾತಿಯ ತ್ಯಾಗದ ಬದುಕು
ತುಘಲಕನ ತೊಳಲಾಟಕೂ
ಹಯವದನನ ಕಥನ
ಹೊಸ ಆಲೋಚನೆಗಳ ಚಿಂತನ
ಸಂಸ್ಕಾರದ ಸಾಕ್ಷಾತ್ಕಾರಕೆ
ಆನಂದ ಭೈರವಿ ರಾಗ ನುಡಿದು
ವಂಶವೃಕ್ಷದ ನೆರಳಿನಲ್ಲಿ
ನೀ ತಂದ ಕಾಣಿಕೆ ಅನುಪಮ
ಜ್ಞಾನ ಪೀಠದ ಕಿರೀಟ ತೊಡಿಸಿ
ನಾಟಕದಲ್ಲಿ ಅಭಿನಯಿಸಿ
ರಂಗಭೂಮಿಗೊಂದು ಘನತೆ ತಂದ
ಪ್ರಗತಿ ಪರ ನಿಲುವಿನ ಸಾಧಕ
ನಾಗಮಂಡಲದ ನಡುವಲ್ಲಿ
ಕಾನೂರ ಹೆಗ್ಗಡತಿಯ ಮನೆಯಲ್ಲಿ
ನಟನೆಗೊಂದು ನೇಮವಿಟ್ಟು
ಸ್ವರ್ಣಕಮಲವ ಮುಡಿಗೇರಿಸಿದರು
ಹೋಗಿ ಬನ್ನಿ ಸಾಗಿ ಬನ್ನಿ
ಕನ್ನಡದ ಮನಗೆ ಮತ್ತೆ
ಮುದದ ಹೊಸ ಚಿಂತನೆಗೆ
ನಾಂದಿಯಾಯಿತು ನಿಮ್ಮ ಬದುಕು
1103ಪಿಎಂ10062019
ಅಮು ಭಾವಜೀವಿ
[6/11, 2:47 PM] +91 98449 43987: ವಾ ವಾ ವಾ ವಾವ್ ಸೂಪರೊ ಸೂಪರು ರೀ ಕವನ💐💐👏👏
[6/11, 2:55 PM] ಕುಮುದ ಬಸವರಾಜ ದಾವಣಗೆರೆ: ಅತಿ ಸುಂದರ ಸರ್ ,👌
[6/11, 3:08 PM] +91 94486 15407: ಸುಂದರ ನಮನ🙏
No comments:
Post a Comment